ಕಾಡು ಕರಿಬೇವು ನಿತ್ಯ ಹರಿದ್ವರ್ಣದ ಹಸಿರು ಪೊದೆಸಸ್ಯ. == ವೈಜ್ಞಾನಿಕ ವರ್ಗೀಕರಣ == ರೂಟೇಸೀ ಕುಟುಂಬದ ಸಸ್ಯ. ವೈಜ್ಞಾನಿಕ ನಾಮ ಮುರ್ರಾಯ ಎಕ್ಸೋಟಿಕ ಅಥವಾ ಮುರ್ರಾಯ ಪನಿಕುಲೇಟ. == ಭೌಗೋಳಿಕ ಹಂಚಿಕೆ == ಭಾರತದ ಮೂಲವಾಸಿಯಾದರೂ ಏಷಿಯಾ ಖಂಡದ ಉಷ್ಣವಲಯ ಕಾಡುಗಳಲ್ಲಿ ಕಂಡುಬರುತ್ತದೆ.ಚೀನಾ,ಆಸ್ಟ್ರೇಲಿಯಗಳಲ್ಲಿ ಕೂಡಾ ಇದೆ. == ಲಕ್ಷಣಗಳು == ಸುಮಾರು ೨೦ ಆಡಿಗಳ ವರೇಗೆ ಬೆಳೆಯುವ ಒಂದು ಪೊದೆ ಸಸ್ಯ.ವರ್ಷವಿಡೀ ಹೂ ಬಿಡುತ್ತದೆ.ಹೊಳಪುಳ್ಳ ರೋಮರಹಿತ ಎಲೆಗಳು.ರಸಭರಿತ ಚತುರ್ರಸ-ಅಂಡಾಕಾರದ ಹಣ್ಣುಗಳು ಕೆಂಪು ಅಥವಾ ಕೇಸರಿ ಬಣ್ಣವಿರುತ್ತದೆ. == ಉಪಯೋಗಗಳು == ತೋಟಗಳಲ್ಲಿ ಹಸಿರು ಎಲೆಗಳಿಗಾಗಿಯೂ,ಸುವಾಸನಾಯುಕ್ತ ಹೂವುಗಳಿಗಾಗಿಯೂ ಬೆಳೆಸುತ್ತಾರೆ.ಎಲ್ಲಾ ವಿಧದ ಮಣ್ಣುಗಳಲ್ಲಿಯೂ ಬೆಳೆಯುತ್ತದೆ.ಉರುವಲಿಗಾಗಿಯೂ ಬೆಳೆಸುವುದುಂಟು. == ಔಷಧೀಯ ಗುಣಗಳು == ಎಲೆಗಳಲ್ಲಿ ಔಷಧೀಯ ಗುಣಗಳಿರುವುದರಿಂದ ಪಾರಂಪರಿಕ ಔಷಧ ಪದ್ಧತಿಯಲ್ಲಿ ಬಳಕೆಯಲ್ಲಿದೆ. ಕೆಟ್ಟ ಕೊಬ್ಬ(ಕೊಲೆಸ್ಟರಾಲ್)ನ್ನು ನಿವಾರಿಸುತ್ತದೆ. ಯಕೃತ್ತನ್ನು ಸಂರಕ್ಷಿಸಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ತಲೆಕೂದಲಿನ ಬೆಳವಣಿಗೆಗೆ ಸಹಾಯಕ. == ಉಲ್ಲೇಖಗಳು ==